ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ ಹೆಸರು ಕಾಂಗ್ರೇಸ್ ಕಾರ್ಯಕಾರಣಿಯಲ್ಲಿ ಸರ್ವಾನುಮತದಿಂದ ಅಂಗೀಕಾರ

ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ ಹೆಸರು ಕಾಂಗ್ರೇಸ್ ಕಾರ್ಯಕಾರಣಿಯಲ್ಲಿ ಸರ್ವಾನುಮತದಿಂದ ಅಂಗೀಕಾರ

ನವದೆಹಲಿ : ಲೋಕಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನು ನೇಮಿಸುವ ನಿರ್ಣಯವನ್ನು ಕಾಂಗ್ರೇಸ್ ನಾಯಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾಂಗ್ರೇಸ್ ಕಾರ್ಯಕಾರಣಿ ಸಭೆಯಲ್ಲಿ ಈ ನಿಲುವು ತೆಗೆದುಕೊಳ್ಳಲಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲೆ ದೆಹಲಿಯ ಅಶೋಕ್ ಹೋಟೇಲ್‌ನಲ್ಲಿ ಕಾಂಗ್ರೇಸ್ ಕಾರ್ಯಕಾರಣ ಸಭೆ ನಡೆಸಲಾಯಿತು. ಸಭೆಯಲ್ಲಿ ಫಲಿಂತಾಶದ ಬಗ್ಗೆ ಪರಾಮರ್ಶೆ ಮಾಡಲಾಯಿತು. ಬಳಿಕ ರಾಹುಲ್ ಗಾಂಧಿ ಅವರನ್ನು ವಿಪಕ್ಷ ನಾಯಕನ್ನಾಗಿ ಮಾಡುವ ಪ್ರಸ್ತಾಪ ಮಂಡಿಸಲಾಯಿತು.

2014 ಮತ್ತು 2019ರ ಎರಡರಲ್ಲೂ ಸದನದಲ್ಲಿ ಅಗತ್ಯವಿರುವ ಒಟ್ಟು ಸ್ಥಾನಗಳ ಶೇಕಡಾ 10 ಕ್ಕಿಂತ ಕಡಿಮೆ ಇದ್ದ ಕಾರಣ ಕಳೆದ 10 ವರ್ಷಗಳಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಸಾಧ್ಯವಾಗಿರಲಿಲ್ಪ, ಈಗ 100 ಸ್ಥಾನಗಳನ್ನು ಪಡೆದಿರುವ ಹಿನ್ನಲೆ ಅಧಿಕೃತ ವಿರೋಧ ಪಕ್ಷವಾಗಿ ಕಾಂಗ್ರೇಸ್ ಹೊರ ಹೊಮ್ಮಿದೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಪಕ್ಷದ ತಿರುವನಂತಪುರಂ ಸಂಸದ ಶಶಿ ತರೂರ್ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರನ್ನಾಗಿ ಮಾಡಲು ಒತ್ತಾಯಿಸಿದ್ದಾರೆ. ನಮಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಬೇಕು, ನಮಗೆ ಮತ ಹಾಕದ ಜನರ ಮನ ಗೆಲ್ಲಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಶಶಿ ತರೂರ್ ಅವರು ಮಾತನಾಡಿ, ರಾಹುಲ್ ಗಾಂಧಿ ಅವರನ್ನು ಲೋಕಸಭೆ ಚುನಾವಣೆಯ “ಮ್ಯಾನ್ ಆಫ್ ದಿ ಮ್ಯಾಚ್” ಎಂದು ಕರೆದರು ಮತ್ತು ಪಕ್ಷದಲ್ಲಿ ನಿಸ್ಸಂದೇಹವಾಗಿ ಹೆಚ್ಚು ಜನಪ್ರಿಯರಾಗಿರುವ ನಾಯಕರು ಹೀಗಾಗೀ ಈ ಸ್ಥಾನವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ
ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ಖಾಯಂ ಮತ್ತು ವಿಶೇಷ ಸದಸ್ಯರು ಸೇರಿದಂತೆ 37 ಮುಖಂಡರ ಪೈಕಿ 32 ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲರೂ ಸೇರ ರಾಹುಲ್‌ಗಾಂಧಿ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಸರ್ವಾನುಮತದಿಂದ ಪ್ರಸ್ತಾಪಕ್ಕೆ ಅಂಗೀಕಾರ ಮಾಡಿದ್ದೇವೆ, ರಾಹುಲ್‌ಗಾಂಧಿ ಅವರು ಯಾವುದೇ ಅಭಿಪ್ರಾಯ ಹೇಳಿಲ್ಲ, ಸ್ವಲ್ಪ ಸಮಯ ಕೇಳಿದ್ದು ಒಂದೇರಡು ದಿನದಲ್ಲಿ ತಮ್ಮ ನಿರ್ಧಾರ ತಿಳಿಸಲಿದ್ದಾರೆ ಎಂದರು. ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಯಾವ ಸ್ಥಾನ‌ ಉಳಿಸಿಕೊಳ್ಳಬೇಕು ಎನ್ನುವುದು ಜೂನ್ನ17 ರೊಳಗೆ ನಿರ್ಧರಿಸಲಾಗುವುದು ಎಂದರು.

Previous Post
ಜನರು ತಮ್ಮ ನಂಬಿಕೆಯನ್ನು ಮರಳಿ ಪಡೆದಿದ್ದಾರೆ ನಾವು ಶಿಸ್ತಿನಿಂದ ಇರಬೇಕು, ಒಗ್ಗಟ್ಟಾಗಿರಬೇಕು ಕಾಂಗ್ರೇಸ್ CWC ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅಭಿಪ್ರಾಯ
Next Post
ಆಡಳಿತ ರಾಜ್ಯಗಳಲ್ಲಿ ನಿರೀಕ್ಷಿತ ಗುರಿ ತಲುಪದ ಕಾಂಗ್ರೇಸ್ CWC ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ

Recent News