ಸಂಸದ, ಶಾಸಕರ ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ಮಾರಕ: ಸುಪ್ರೀಂ

ಸಂಸದ, ಶಾಸಕರ ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ಮಾರಕ: ಸುಪ್ರೀಂ

ನವದೆಹಲಿ, ಮಾ. 4: ಸಂಸತ್ತಿನಲ್ಲಿ ಭಾಷಣ ಮಾಡಲು ಮತ್ತು ಮತಗಳಿಗಾಗಿ ಲಂಚ ಪಡೆಯುವ ಪ್ರಕರಣಗಳಲ್ಲಿ ಸಂಸದರು, ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಈ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಂವಿಧಾನ ಪೀಠ ಸೋಮವಾರ ರದ್ದುಗೊಳಿಸಿದೆ. ಮೂಲಕ ಮತ್ತೊಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಸಂಸತ್‌ನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಸಂಸದರು, ಶಾಸಕರು ಲಂಚ ಪಡೆಯುವ ಪ್ರಕರಣಗಳಲ್ಲಿ ಕಾನೂನು ಕ್ರಮದ ವಿನಾಯಿತಿ ಒದಗಿಸಿದ್ದ ಐವರು ಸದಸ್ಯರ ಸಂವಿಧಾನ ಪೀಠದ 1998ರ ತೀರ್ಪನ್ನು ಸೋಮವಾರ ತೀರ್ಪು ರದ್ದುಗೊಳಿಸಿದೆ. ಲಂಚ ಪಡೆಯುದನ್ನು ಸಂಸದೀಯ ಸವಲತ್ತುಗಳಿಂದ ರಕ್ಷಿಸಲಾಗಿಲ್ಲ ಮತ್ತು 1998ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಎರಡು ವಿಧಿಗಳು ಚುನಾಯಿತ ಪ್ರತಿನಿಧಿಗಳಿಗೆ ಭಯವಿಲ್ಲದೆ ಕೆಲಸ ಮಾಡಲು ಅನುವು ಮಾಡಿಕೊಡಲು ಕಾನೂನು ಕ್ರಮದಿಂದ ವಿನಾಯಿತಿಯನ್ನು ಒದಗಿಸುತ್ತವೆ.

ಪಿವಿ ನರಸಿಂಹ ರಾವ್ ಪ್ರಕರಣದ 1998ರ ತೀರ್ಪನ್ನು ನಾವು ಒಪ್ಪುವುದಿಲ್ಲ. ಮತ ಚಲಾಯಿಸಲು ಅಥವಾ ಭಾಷಣ ಮಾಡಲು ಲಂಚ ಪಡೆಯುವ ಪ್ರಕರಣಗಳಲ್ಲಿ ಸಂಸದ, ಶಾಸಕರಿಗೆ ವಿನಾಯಿತಿ ನೀಡುವ ಈ ತೀರ್ಪು ವ್ಯಾಪಕ ಪರಿಣಾಮಗಳನ್ನು ಬೀರುತ್ತವೆ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು. 1998ರಲ್ಲಿ, ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಪಿವಿ ನರಸಿಂಹ ರಾವ್ ವಿರುದ್ಧ ಸಿಬಿಐ ಪ್ರಕರಣದಲ್ಲಿ ನೀಡಿದ ಬಹುಮತದ ತೀರ್ಪಿನಲ್ಲಿ, 105 (2) ನೇ ವಿಧಿಯ ಅಡಿಯಲ್ಲಿ ಸದನದ ಒಳಗೆ ಮಾಡಿದ ಯಾವುದೇ ಭಾಷಣ ಮತ್ತು ಮತಕ್ಕಾಗಿ ಕ್ರಿಮಿನಲ್ ಮೊಕದ್ದಮೆಯ ವಿರುದ್ಧ ಸಂಸದರಿಗೆ ವಿನಾಯಿತಿ ಇದೆ ಎಂದು ಹೇಳಿದೆ.

ಲಂಚವನ್ನು ಸಂಸತ್ತಿನ ಸವಲತ್ತುಗಳಿಂದ ರಕ್ಷಿಸಲಾಗಿಲ್ಲ. ಭ್ರಷ್ಟಾಚಾರ ಅಥವಾ ಸಂಸದರು ಲಂಚ ಪಡೆಯುವುದು ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯನ್ನು ನಾಶಪಡಿಸುತ್ತದೆ. ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಲಂಚ ಪಡೆಯುವ ಶಾಸಕರೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಹೊಣೆಗಾರರಾಗಿದ್ದಾರೆ ಎಂದು ಪೀಠ ಹೇಳಿದೆ. ಪಿವಿ ನರಸಿಂಹ ರಾವ್ ಪ್ರಕರಣದ ತೀರ್ಪು, ಲಂಚ ಸ್ವೀಕರಿಸಿ ಅದರಂತೆ ಮತ ಚಲಾಯಿಸುವ ಶಾಸಕರನ್ನು ರಕ್ಷಿಸಿದರೆ, ಲಂಚ ಪಡೆದರೂ ಸ್ವತಂತ್ರವಾಗಿ ಮತ ಚಲಾಯಿಸುವ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ‘ವಿರೋಧಾಭಾಸದ ಪರಿಸ್ಥಿತಿ’ ಉಂಟಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

Previous Post
ದೆಹಲಿ ಬಜೆಟ್ಟಿನಲಿ ಶಿಕ್ಷಣಕ್ಕಾಗಿ 16,396 ಕೋಟಿ
Next Post
ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ

Recent News