₹2,00,000 ಕೋಟಿ ವೆಚ್ಚದಲ್ಲಿ ಅಮೆರಿಕಾದಂತಹ ರಸ್ತೆಗಳ ನಿರ್ಮಾಣ: ನಿತಿನ್‌ ಗಡ್ಕರಿ

 ₹2,00,000 ಕೋಟಿ ವೆಚ್ಚದಲ್ಲಿ ಅಮೆರಿಕಾದಂತಹ ರಸ್ತೆಗಳ ನಿರ್ಮಾಣ: ನಿತಿನ್‌ ಗಡ್ಕರಿ

ದೇಶದ ಈ ಭಾಗದ ರಸ್ತೆಗಳು ಡಿಸೆಂಬರ್‌ ಹೊತ್ತಿಗೆ ಅಮೆರಿಕಾದಂತಹ ರಸ್ತೆಗಳಾಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಹಾಗಾದರೆ ಈ ಅದ್ಭುತ ರಸ್ತೆಗಳು ಯಾವ ಭಾಗದಲ್ಲಿ ನಿರ್ಮಾಣವಾಗಲಿವೆ ಹಾಗೂ ಇದಕ್ಕೆ ತಗಲುವ ವೆಚ್ಚ ಎಷ್ಟು ಲಕ್ಷ ಕೋಟಿ ಎನ್ನುವ ಮಾಹಿತಿಯನ್ನು ಅವರೇ ತಿಳಿಸಿದ್ದಾರೆ ಇಲ್ಲಿ ಗಮನಿಸಿ. ಉತ್ತರಾಖಂಡದಲ್ಲಿ 2,00,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆಗಳು 2024ರ ಡಿಸೆಂಬರ್‌ ಅಂತ್ಯದ ವೇಳೆಹೆ ಅಮೆರಿಕದ ರಸ್ತೆಗಳಂತಾಗಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ತಿಳಿಸಿದ್ದಾರೆ ಅಂತಾ ಪ್ರಜಾವಾಣಿಯಲ್ಲಿ ವರದಿ ಆಗಿದೆ.

ಟನಕಪುರದಲ್ಲಿ 2 ಸಾವಿರ ಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರಾಖಂಡದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ 1.40 ಲಕ್ಷ ಕೋಟಿ ಅನುದಾನ ನೀಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ 60 ಸಾವಿರ ಕೋಟಿಯನ್ನು ಶೀಘ್ರದಲ್ಲೇ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ. 2024ರ ವರ್ಷಾಂತ್ಯದಲ್ಲಿ ಉತ್ತರಾಖಂಡದ ರಸ್ತೆಗಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಸರಿಹೊಂದಲಿದೆ. ಉತ್ತರಾಖಂಡದ ರಸ್ತೆಗಳು ಅಮೆರಿದ ರಸ್ತೆಗಳಂತಾಗಲಿವೆ ಎಂಬುದನ್ನು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರ ಸಮ್ಮುಖದಲ್ಲಿ ಹೇಳಬಯಸುತ್ತೇನೆ. 2014ರಲ್ಲಿ ಉತ್ತರಾಖಂಡದಲ್ಲಿ 2,517 ಕಿಲೋ ಮೀಟರ್‌ ರಾಷ್ಟ್ರೀಯ ಹೆದ್ದಾರಿ ಇತ್ತು. ಇದೀಗ ಅದನ್ನು 3,608 ಕಿಲೋ ಮೀಟರ್‌ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಮಾನಸಖಂಡ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಟನಕಪುರ ಬಳಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಧಾಮಿ ಅವರು ನಿತಿನ್‌ ಗಡ್ಕರಿ ಅವರಿಗೆ ಧನ್ಯವಾದ ಅರ್ಪಿಸಿದ್ದು, ಉತ್ತರಾಖಂಡದ ಅಭಿವೃದ್ಧಿಗೆ ಕೇಳುವ ಮೊದಲೇ ಯೋಜನೆ ಮಂಜೂರು ಮಾಡಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.

Previous Post
ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಮಾಕೇನ್‌ಗೆ ಟಿಕೆಟ್
Next Post
ಗುಜರಾತ್‌ ನಿಂದ ಜೆ ಪಿ ನಡ್ಡಾ, ಕಾಂಗ್ರೆಸ್‌ ಸೇರಿದ್ದ ನಾಯಕನಿಗೆ ಮಹಾರಾಷ್ಟ್ರದಿಂದ ಟಿಕೆಟ್

Recent News