ಚುನಾವಣೆ ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಗಡ್ಕರಿ

ಚುನಾವಣೆ ಭಾಷಣ ಮಾಡುವ ವೇಳೆ ಕುಸಿದು ಬಿದ್ದ ಗಡ್ಕರಿ

ಯವತ್ಮಾಲ್‌, ಏ. 24: ಮಹಾರಾಷ್ಟ್ರದ ಯವತ್ಮಾಲ್‌ದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿ ಮಾತನಾಡುತ್ತಿದ್ದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಈ ಸಮಯದಲ್ಲಿ ಅವರು ಅಂಗರಕ್ಷಕರು ಧಾವಿಸಿ. ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯರು ಇದೀಗ ಗಡ್ಕರಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ಯವತ್ಮಾಲ್‌ನ ಪುಸಾದ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗಡ್ಕರಿ ಅವರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರ ಅಂಗರಕ್ಷಕರು ಹಾಗೂ ಪಕ್ಷದ ನಾಯಕರು ಧಾವಿಸಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ.ಈ ವೇಳೆ ಕಾರ್ಯಕ್ರಮದಲ್ಲಿ ವೈದ್ಯರು ಇದ್ದ ಕಾರಣ ಅವರನ್ನು ಪರೀಕ್ಷೆ ಮಾಡಿ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ.
ನಾಗ್ಪುರದ ಬಿಜೆಪಿ ಅಭ್ಯರ್ಥಿ ಗಡ್ಕರಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕ ರಾಜಶ್ರೀ ಪಾಟೀಲ್ ಅವರ ಪರ ಪ್ರಚಾರ ನಡೆಸಿದ್ದಾರೆ. ರಾಜಶ್ರೀ ಪಾಟೀಲ್ ಅವರು ಯವತ್ಮಾಲ್-ವಾಶಿಮ್ ಲೋಕಸಭಾ ಕ್ಷೇತ್ರದಿಂದ ಮಹಾಯುತಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

Previous Post
ಕೊನೆಗೂ ಸರಿಯಾಗಿ ಬಹಿರಂಗ ಕ್ಷಮೆ ಕೇಳಿದ ಬಾಬಾ ರಾಮದೇವ್
Next Post
ಸಾರ್ವಜನಿಕ ಕಲ್ಯಾಣಕ್ಕಾಗಿ ಖಾಸಗಿ ಆಸ್ತಿ ಸ್ವಾಧೀನ: ಸಿಜೆಐ ಹೇಳಿದ್ದೇನು?

Recent News