ಮುರುಘಾ ಶ್ರೀಗಳಿಗೆ ಮತ್ತೆ ನ್ಯಾಯಂಗ ಬಂಧನ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನಲೆ | 4 ತಿಂಗಳ ನ್ಯಾಯಂಗ ಬಂಧನಕ್ಕೆ ಸುಪ್ರೀಂ ಆದೇಶ

ಮುರುಘಾ ಶ್ರೀಗಳಿಗೆ ಮತ್ತೆ ನ್ಯಾಯಂಗ ಬಂಧನ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹಿನ್ನಲೆ | 4 ತಿಂಗಳ ನ್ಯಾಯಂಗ ಬಂಧನಕ್ಕೆ ಸುಪ್ರೀಂ ಆದೇಶ

ನವದೆಹಲಿ : ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪದ‌ ಮೇಲೆ ಜೈಲು ಸೇರಿ ಇತ್ತಿಚೇಗೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಚಿತ್ರದುರ್ಗ ಮುರುಘಾ ಮಠದ ಮುರುಘಾ ಶ್ರೀಗಳಿಗೆ ಸುಪ್ರೀಂಕೋರ್ಟ್ ಮತ್ತೆ ನಾಲ್ಕು ತಿಂಗಳಗಳ ಕಾಲ ನ್ಯಾಯಂಗ ಬಂಧನ ವಿಧಿಸಿದೆ. ಒಂದು ವಾರದ ಅವಧಿಯಲ್ಲಿ ಪೊಲೀಸರ ಮುಂದೆ ಶರಣಾಗುವಂತೆ ಅದು ಆದೇಶಿಸಿದೆ.

ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್‌ನಾಥ್ ನೇತೃತ್ವದಲ್ಲಿ ದ್ವಿ ಸದಸ್ಯ ಪೀಠ, ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ಸ್ವಾಮೀಜಿಯಿಂದ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರುವ ಮತ್ತು ತನಿಖೆ ದಿಕ್ಕು ತಪ್ಪುವ ಸಾಧ್ಯತೆಯ ವಾದವನ್ನು ಪುರಷ್ಕರಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಅಪರ್ಣಾ ಭಟ್, ಶ್ರೀಗಳ ವಿರುದ್ಧ ದಾಖಲಾಗಿರುವ ಫೊಕ್ಸೊ ಪ್ರಕರಣ ಅತಂತ್ಯ ಸೂಕ್ಷ್ಮವಾಗಿದೆ, ಹೈಕೋರ್ಟ್ ನೀಡಿರುವ ಜಾಮೀನು ದುರ್ಬಳಕೆಯಾಗುವ ಸಾಧ್ಯತೆ ಇದೆ. ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ, ಪ್ರಕರಣದಲ್ಲಿ 40 ಕ್ಕೂ ಅಧಿಕ ಸಂತ್ರಸ್ಥ ವಿದ್ಯಾರ್ಥಿನಿಯರಿದ್ದಾರೆ ಆ ಪೈಕಿ ಇನ್ನು ಕೆಲವು ವಿದ್ಯಾರ್ಥಿನಿಯರು ಮತ್ತು ಅವರ ಪೊಷಕರ ಹೇಳಿಕೆ ದಾಖಲಿಸಬೇಕು, ಸಾಕ್ಷ್ಯಗಳು ವಿಚಾರಣೆ ನಡೆಸಬೇಕಿದೆ. ಈ ತನಿಖೆ ಹಂತದಲ್ಲಿ ಜಾಮೀನು ನೀಡುವುದು ಪ್ರಕರಣದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ಆದರೆ ಇದಕ್ಕೆ ಮುರುಘಾ ಶ್ರೀ ಪರ ವಕೀಲ ಸಿದಾರ್ಥ ಲೂಥ್ರಾ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿ ಈಗಾಗಲೇ ಒಂದೂವರೆ ವರ್ಷ ಆರೋಪಿ ಜೈಲಿನಲ್ಲಿದ್ದಾರೆ, ಜಾಮೀನು ನೀಡುವಾಗ ಅವರಿಗೆ ಚಿತ್ರದುರ್ಗ ಪ್ರವೇಶಕ್ಕೆ ಹೈಕೋರ್ಟ್ ಅನುಮತಿ ನೀಡಿಲ್ಲ. ಜಾಮೀನು ಪಡೆದ ಬಳಿಕವೂ ಆರೋಪಿ ಪ್ರಕರಣದ ಮೇಲೆ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿಲ್ಲ ಎಂದು ವಾದಿಸಿದರು‌.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ.ವಿಕ್ರಮ್ ನಾಥ್, ಆರೋಪಿ ಪ್ರಭಾವಿಯಾಗಿದ್ದಾರೆ, ಚಿತ್ರದುರ್ಗ ಪ್ರವೇಶಿದರೂ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು, ಅಧಿಕಾರ ಮತ್ತು ಹಣದ ಶಕ್ತಿ ಅವಳ ಬಳಿ ಇದೆ ಈ ಬಗ್ಗೆಯೂ ಗಮನಹರಿಬೇಕಲ್ಲವೇ, ಗಡಿ ಪ್ರವೇಶಿಸದೇ ಪರಿಣಾಮ ಬೀರಬಹುದಲ್ಲವೇ ಎಂದು ಅಭಿಪ್ರಾಯಪಟ್ಟರು.

ಇದೇ ಅಂಶಗಳ ಆಧಾರದ ಮೇಲೆ ಆರು ತಿಂಗಳು ಅವರಿಗೆ ನ್ಯಾಯಂಗ ಬಂಧನಕ್ಕೆ ವಿಧಿಸುವ ನಿರ್ಧಾರಕ್ಕೆ ಕೋರ್ಟ್ ತಿರ್ಮಾನಿಸಿತು. ಆದರೆ ಈ ವೇಳೆ ಮಧ್ಯಪ್ರವೇಶಿದಿ ವಿಕ್ರಮ್‌ನಾಥ್, ಆರು ತಿಂಗಳ ಸಮಯ ಹೆಚ್ಚಾಗಲಿದೆ ಈ ಅವಧಿ ಕಡಿಮೆ ಮಾಡಬೇಕು, ಈಗಾಗಲೇ ಒಂದೂವರೆ ವರ್ಷದಿಂದ ತನಿಖೆ ನಡೆಸುತ್ತಿದ್ದು ಹೇಳಿಕೆಗಳು ದಾಖಲಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ಪೀಠ ಈ ಅವಧಿಯನ್ನು ನಾಲ್ಕು ತಿಂಗಳಿಗೆ ಇಳಿಸಿತು. ಒಂದು ವೇಳೆ ತನಿಖೆ ಪೂರ್ಣಗೊಳ್ಳದಿದ್ದರೆ ಹೆಚ್ಚುವರಿ ಎರಡು ತಿಂಗಳ ಸಮಯ ಪಡೆಯಬಹುದು ಎಂದು ಹೇಳಿತು‌.

ಮುಂದಿನ ಒಂದು ವಾರದಲ್ಲಿ ಆರೋಪಿ ಪೊಲೀಸರ ಮುಂದೆ ಹಾಜರಾಗಿ ನ್ಯಾಯಂಗ ಬಂಧನಕ್ಕೆ ಒಳಪಡಬೇಕು ಎಂದು ಆದೇಶಿಸಿತು. ಸಾಧ್ಯವಾದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ಕೋರ್ಟ್ ಗೆ ಅಂತಿಮ ಚಾರ್ಜ್ ಶೀಟ್ ಸಲ್ಲಿಸಬೇಕು. ವಿದ್ಯಾರ್ಥಿನಿಯರ ಹೇಳಿಕೆ ಪಡೆಯಲು ವಿಶೇಷ ನ್ಯಾಯಲಯಗಳ ಬಳಕೆ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿತು.

Previous Post
ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳು ಪೋಷಕರ ಬಳಿಯೇ ಕೂರಬೇಕು: ಡಿಜಿಸಿಎ
Next Post
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ಪರಿಗಣನೆಯಲ್ಲಿದೆ – ಚುಣಾನಣಾ ಆಯೋಗ

Recent News